°°°°°°°°°°°°°°°°°°°°°°°°°°°°°°°°°°°°°°°°°°°°°°°°°°
ಭಾರತದಲ್ಲಿ ಮೊಟ್ಟ ಮೊದಲಿಗೆ ಗಣತಂತ್ರವನ್ನು ರಚಿಸಿ ಬೆನಕನನ್ನು ಗಣಾಧಿಪತಿಯನ್ನಾಗಿಸುತ್ತಾನೆ. ಆರ್ಯ ದ್ರಾವಿಡರಲ್ಲಿ
ಒಗ್ಗಟ್ಟಿನಿಂದ ಒಂದು ಹೊಸ ತೀರವನ್ನು ತರುತ್ತಾನೆ. ರುದ್ರಗಣ, ವೀರಗಣ, ಶಿವಗಣ, ದೇವಗಣ, ಮರುದ್ಗಣರಲ್ಲಿ ಐಕ್ಯಮತ್ಯವನ್ನು
ತರುತ್ತಾನೆ. ಪಂಚ ಗಣತಂತ್ರವನ್ನು ನಿರ್ಮಿಸಿ ಅದೇ ಒಂದು ಬೃಹದಾಯಾವನ್ನು ತರುತ್ತಾನೆ. ವೀರೇಶ ನಿಸ್ವಾರ್ಥಿ, ಮಹಾತ್ಯಾಗಮಯ ಜೀವಿ.
ಆತನು ಅಪ್ರತಿಮ ವೀರಶ್ರೀಯ ಪ್ರತೀಕ. ವೀರೇಶನು ಅಂದು ನಡೆಯುತ್ತಿರುವ ಏನೆಲ್ಲ ಬಗೆಯ ಅನ್ಯಾಯ, ಅನೀತಿ, ಅನಾಚಾರಗಳ ವಿರುದ್ಧ
ಹೋರಾಡುವುದೇ ಆತನ ಜೀವನದ ಗುರಿಯಾಗಿದ್ದಿತು. ಆತನಂತೆ ಸ್ವಾರ್ಥ ಸಂಕುಚಿತ ಭಾವನೆಗಳನ್ನು ತೊರೆದು ವಿದಾಯಕ ವೀಧಿಯಲ್ಲಿ
ಮುನ್ನಡೆಯಲು ಅನುಕೂಲ. ಇದಕ್ಕೆ ಇದು ಒಳ್ಳೆಯ ಸುವರ್ಣವಕಾಶ. ಈ ದಿಸೆಯಲ್ಲಿ ಆ ಮಹಾಮಹಿಮನ ಆ ಮಹಾವೀರನ ಆವಾ ಹಾಭದ್ರಜೀವಿ
ಶ್ರೀವೀರಭದ್ರೇಶ್ವರ ಜಯಂತಿಯನ್ನು ಪ್ರತಿವರ್ಷ "ಭಾದ್ರಪದ ಮಾಸದ ಮೊದಲ ಮಂಗಳವಾರ" ದಂದು ಎಲ್ಲರೂ ಮಾಡಿ ಕರ್ತವ್ಯ ಪಾರಾಗಬೇಕಾದುದು
ಸೂಕ್ತವಾಗಿದೆ.
ಸರ್ವರಿಗೆ ಉತ್ತಮವಾದ ಕಾರ್ಯಗಳಿಗೆ ವಿಘ್ನೇಶ್ವರನು ವಿಘ್ನನಿವಾರಣೆಯನ್ನು ಮಾಡಿ
ಕರುಣಾಳು ಶ್ರೀ ವೀರಭದ್ರನು ವಿಜಯವನ್ನು ಹಾರೈಸಲಿ ಎಂದು ಬೇಡಿಕೊಳ್ಳೋಣ.
ಶ್ರೀ ವೀರಭದ್ರೇಶ್ವರ ಪ್ರಚಾರ ಸಮಿತಿ