°°°°°°°°°°°°°°°°°°°°°°°°°°°°°°°°°
ಪಂಚಮುಂಡ್ರಾಸುರನೆಂಬ ರಕ್ಕಸ ಬಹು ಬಲಶಾಲಿ ಮತ್ತು ಅಘೋರ ತಪಗೈದು ವರವ ಪಡೆದುಕೊಂಡಿದ್ದ. ಸೊಕ್ಕಿನಿಂದ ಮೆರೆಯುತೆಲ್ಲರಿಗೆ
ಕಿರುಕುಳ ಕೊಡತೊಡಗಿದ. ಪರಮಾತ್ಮ ಪಾರ್ವತಿಯರು ವೀರಭದ್ರನಿಗೆ ಅಸುರನ ವಧಿಸಲು ಅಪ್ಪಣೆ ಇತ್ತರು. ವೀರಭದ್ರನು ಮೊದಲು ಬುದ್ಧಿ
ಮಾತು ಹೇಳಿದ ತಪದ ಬಲವಿದೆ ಅದನ್ನು ಒಳ್ಳೆಯದಕ್ಕೆ ಉಪಯೋಗಿಸು ಪರಾಕ್ರಮಿಯಾಗಿರುವೆ, ಅದನ್ನು ಪರೋಪಕರಕ್ಕೆ ಬಳಸು ಅಸುರ ನೆನೆಸಿದೆ
ಸುರೇಂದ್ರನೆನಿಸು. ಪಂಚಮುಂಡ್ರಾಸುರಗೆ ಅಹಿತವೆನಿಸಿತೀ ಉಪದೇಶ ತನ್ನನ್ನು ಗೆಲ್ಲುವವರಾರೂ ಇಲ್ಲವೆಂಬ ಹಮ್ಮು ಎಮ್ಮರವಾಗಿತ್ತು.
ವೀರಭದ್ರನಿಗೂ ಪಂಚಮುಂಡ್ರಾಸುರನಿಗೂ ಘನಘೋರ ಯುದ್ಧವಾಯಿತು. ಪಂಚ ಮುಂಡ್ರಾಸುರನು ಆತನಾಗುವ ಕೊನೆ ಘಳಿಗೆಯೊಳು ವೀರಭದ್ರನಿಗೆ
ನೇಮಿಸಿ "ನನ್ನ ಅಹಂಕಾರದಿಂದ ನನಗೀಗತಿ ಪ್ರಾಪ್ತವಾಯಿತು, ನಿನ್ನುಪದೇಶ ಕೇಳದ ಕೆಟ್ಟೆ, ನನ್ನ ಕೊನೆಯ ಆಸೆ ಈಡೇರಿಸುವೆಯಾ
ಗುರುವೇ?" ವೀರಭದ್ರನ ಕೋಪ ಕರಗಿ "ಮಹಾ ತಪಸಿ ನಿನ್ನ ಇಚ್ಛೆ ಏನು ಹೇಳು ಪೂರೈಸುವೆ" ಆಗ ಮುಂಡ್ರಾಸುರನು "ವೀರೇಶ ನನ್ನ ತನು
ಮತ್ತು ನೆನಪು ಚಿರಕಾಲವಿರುವಂತೆ ಹರಸು" ಎಂದುನು. ವೀರೇಶನು "ತಥಾಸ್ತು"ವೆಂದನು. ಪಂಚಮಂಡ್ರಾಸುರ ಶಾಂತನಾಗಿ ಕಣ್ಮುಚ್ಚಿದನು.
ಹಾರನವಳಿದ ಕೊಳೆಯದೆ ಉಳಿಯುವುದೆಂತು? ಹೇಗೆ ಮಾಡುವುದೆಂದು ತನ್ನ ಒಡನಾಡಿಗಳೊಡನೆ ಯೋಚಿಸಿದ ವೀರಭದ್ರ. ತಂದೆ ರುದ್ರದೇವ
ರೋಗರುಜಿನ ಬರದಂತೆ ನೋಡಿಕೊಳ್ಳುತ್ತಿದ್ದರು ಮುಪ್ಪಡರದಂತೆ ವ್ಯವಸ್ಥೆಯಾಯಿತು. ಮಡದಿ ಕಾಳಿಕಾ ಭವಾನಿಯೊಡನೆ ಚರ್ಚಿಸಿ ರಕ್ಕಸನ
ದೇಹ ಅಮರಗೋಳಿಸಲಣಿಯಾದ. ಆತನ ಶಿರವನ್ನು ಗುಗ್ಗುಳ ಕೊಡಮಾಡಿದ, ಮೊಳಕೈ ಗೊಟ ದಡಿದ, ಕರುಳಿನ ಸಿಂಬಿ ಸುತ್ತಿದ, ನೆಣವ ಕಣಕ ಮಾಡಿ
ಮೆತ್ತಿದ, ರಕ್ತ ಎಣ್ಣೆಯಂತೆ ಹೊಯ್ದು, ಬೆರಳ ಶಸ್ತ್ರವ ಮಾಡಿದ, ಕಾಲು ಕೊಯ್ಕೊಲಸ್ತ್ರ , ಅಂಗೈಯನ್ನು ಜಾಗಟೆ ಮಾಡಿದ. ಹೀಗೆ
ಅಸುರನ್ನೆಲ್ಲಾ ಹವಾಯುವಗಳನ್ನು ಗುಗ್ಗಳ ಕೊಡಕ್ಕೆ ಉಪಯೋಗಿಸಿದ. ಉಗ್ಗಿ ಎಡೆಮಾಡಿ ಅಗ್ನಿ ಪ್ರವೇಶ ಮಾಡಿದ ವೀರೇಶ. ಯುದ್ಧದವಳು
ಸತ್ತ ಪ್ರಾಣಿ ಚರ್ಮದಿಂದ ವಾದ್ಯಗಳ ಮಾಡಿ ಓದಿಸುತ ಬಾರಿಸುತ ಮೇಳಗಳೊಂದಿಗೆ ಪುರವಂತನಾಗಿ ಒಡಪು ಹೇಳುತ್ತಾ ನಾಟ್ಯ ಮಾಡುತ್ತ
ಅಲ್ಲಲ್ಲಿಗೆ ಗುಗ್ಗಳ ಕೊಡಇಳುಹಿ ವ್ರತ ಮಂಗಲ ಮಾಡುತ ವೀರಭದ್ರ ಪರಶಿವನ ಪಾದಕ್ಕೆ ತಂದು ಪಾದೋದಕ ಪ್ರಸಾದ ಮಾಡಿ ಮುಂಡ್ರಾಸುರನ
ಅಮರಗೊಳಿಸಿದ. ಇಂದಿಗೂ ಗೊಗ್ಗೋಳ ಹೊರಡುವುದು ಆತನ ನೆನೆಹಿಗಾಗಿ ಮತ್ತು ಮನೆಯಿಂದ ಗುಡಿವರೆಗೆ ಹವೆ ಶುದ್ಧವಾಗಿ ಮನ ಮುದವಾಗಲೆಂದು
ಮಾಡುವರು.