ಸ್ವಾಮಿಯ ಹಣೆಯ ಮೇಲೆ ಲಿಂಗದ ಕುರುಹು ಇರುವುದು ಏತಕ್ಕೆ ?
ಇದೊಂದು ಸನಾತನ ಧರ್ಮದ ವಿಜ್ಞಾನ. ಸನಾತನ ಕಾಲದಲ್ಲಿ ದೇವತೆಯು ಆರಾಧ್ಯ ದೇವತೆಯಾಗಬೇಕಾದರೆ, ದೇವತೆಯ ವಿಗ್ರಹದಲ್ಲಿ ಲಿಂಗಾಂಕಿತ
ವಿರುವುದು ಅತ್ಯವಶ್ಯಕವಾಗಿದ್ದಿತು. ಲಿಂಗಧಾರಿಯನ್ನು ಆರಾಧ್ಯರೆಂದು ಕರೆಯುವ ಸತ್ ಸಂಪ್ರದಾಯ ಭಾರತೀಯ ಸಂಸ್ಕೃತಿಯಲ್ಲಿ ಇಂದಿಗೂ
ಜೀವಂತವಿದೆ.
ಲಿಂಗಾಂಕಿತವನ್ನು ಇಂದಿಗೂ ಸಹ ಕೊಲ್ಲಾಪುರದ ಮಹಾಲಕ್ಷ್ಮಿಯ ವಿಗ್ರಹದಲ್ಲಿ, ಪಂಡರಾಪುರದ ವಿಠಲನ ವಿಗ್ರಹದಲ್ಲಿ, ತುಳಜಾ ಭವಾನಿಯ
ವಿಗ್ರಹದಲ್ಲಿ, ಕೇರಳದ ಅನಂತ ಪದ್ಮನಾಭನ, ಬಾರ್ಸಿ ಶಹರದ ವಿಷ್ಣುವಿನ ವಿಗ್ರಹದಲ್ಲಿ ಕಾಣಬಹುದು.
ಪುರಾಣಗಳಲ್ಲಿ ಉಕ್ತವಾಗಿರುವಂತೆ, ಸತೀ ಕಾಂಡದಲ್ಲಿ, ಒಮ್ಮೆ ದಕ್ಷನು ಬೃಹದಾಕಾರವಾದಂತಹ ವಿಷ್ಣುವಿನ ವಿಗ್ರಹವನ್ನು ಕೆತ್ತಿಸಿ,
ಶಿಲ್ಪಿಗೆ ಲಿಂಗಾಂಕಿತವನ್ನು ಮಾಡಿದಂತೆ ತಾಕೀತು ಮಾಡಿದನು. ಕೆತ್ತನೆಯಾದ ಮೂರ್ತಿಯನ್ನು ದಕ್ಷನ ಸಂಪೂರ್ಣ ಸೈನ್ಯವು ಅರಮನೆಯ
ಒಳಗೆ ಎಳೆದು ತರಲು ಪ್ರಯತ್ನಿಸಿದರೂ ಸಾಧ್ಯವಾಗದೆ ವಿಫಲವಾಗುವರು. ಇದನ್ನು ಗಮನಿಸಿದ ಸತಿಯು, ವಿಷ್ಣುವಿನ ಹಸ್ತದಲ್ಲಿ ತಾನು
ಪೂಜಿಸುವ ಲಿಂಗವನ್ನು ಇರಿಸಿದಾಗ ಮೂರ್ತಿಯು ಸರಾಗವಾಗಿ ಅರಮನೆಯ ಒಳಗೆ ಬರುವುದು. ಲಿಂಗಾಂಕಿತ ವಲ್ಲದ ಯಾವುದೇ ವಿಗ್ರಹವು ಪೂಜೆಗೆ
ಯೋಗ್ಯವಲ್ಲ ಎನ್ನುವ ಸನಾತನ ವಿಜ್ಞಾನದ ಸಾಕ್ಷಿ ಈ ಘಟನೆ.
ವೈಜ್ಞಾನಿಕವಾಗಿ ದೇಹದ ಮೇಲೆ ಧರಿಸಲು ಯೋಗ್ಯವಾದ ಹಲವಾರು ಪುಟ್ಟ ಪುಟ್ಟ ಲಿಂಗಗಳ ಕುರುಹಗಳನ್ನು ಹರಪ್ಪ ಮೊಹೆಂಜೋದಾರೊ
ಉತ್ಕನನದಲ್ಲಿ ಕಾಣಬಹುದು. ಸರ್ಜಾ ಮಾರ್ಷಲ್ ತನ್ನ ಪುಸ್ತಕದಲ್ಲಿ ಈ ಕೆಳಗಿನಂತೆ ನಮೂದಿಸಿದ್ದಾನೆ.
ಇಂತಹ ದೇಹದ ಮೇಲೆ ಧರಿಸುವಂತಹ ಲಿಂಗಗಳ ಮತ್ತೊಂದು ವಿಶೇಷತೆ ಎಂದರೆ. ಇವುಗಳನ್ನು ಗುರುಪರಂಪರೆಯವರು ದೀಕ್ಷೆಯ ಮೂಲಕ ನೀಡಿದ
ನಂತರವೇ ಧರಿಸಬೇಕು, ತಂತಾನೆ ಲಿಂಗಗಳನ್ನು ದೇವತೆಗಳನ್ನೂ ಸೇರಿದಂತೆ ಯಾರೂ ಧರಿಸುವಂತಿಲ್ಲ ಎನ್ನುವ ಶಿವಾಗಮಗಳ ನಿಯಮವಿದೆ.
ಹಾಗಾದರೆ ವೀರಭದ್ರ ಸ್ವಾಮಿಗೆ ದೀಕ್ಷೆಯನ್ನು ಮಾಡಿ ಲಿಂಗವನ್ನು ಧಾರಣೆಗೆ ಕಾರಣವಾದಂತಹ ಗುರುಗಳು ಯಾರು ? ಎನ್ನುವ ಪ್ರಶ್ನೆ
ಮೂಡುತ್ತದೆ.
ಇದಕ್ಕೆ ಪುಷ್ಟಿ ಕೊಡುವಂತೆ ಸಾಂಬ ಪುರಾಣ ಕೂಶ್ಮಾoಡ ರುದ್ರಾಧ್ಯಾಯದಲ್ಲಿ “ಪುರಾ ಮುರಾರಿ ಬ್ರಹ್ಮಾಧ್ಯ ವೀರಭದ್ರೋ ಗುಹಸ್ಥತಾ,
ಹೇರಂಭೋ , ನಂದಿ ಬೃಂಗೀಶ ಮಹಾಕಾಲ …. ರಾಕ್ಷಸ ಸಿದ್ದಾ ಗಂಧರ್ವ ಯಕ್ಷ ಕಿನ್ನರ ಶಿವಾಧೀಕ್ಷಾ ಕಾಂಕ್ಷಯಿತ್ವಾ ಪ್ರಾಪ್ತಾ ಆರಾಧ್ಯ
ಪಂಚಕಂ“ ಎಂದರೆ ಬ್ರಹ್ಮ ವಿಷ್ಣು ಷಣ್ಮುಖ ವೀರಭದ್ರ ಗಣಪತಿ ದೇವೇಂದ್ರ ಸೇರಿದಂತೆ ಎಲ್ಲಾ ದೇವತೆಗಳಿಗೆ ಶಿವ ದೀಕ್ಷೆಯಲ್ಲಿ ಇವರೇ
ಗುರುಗಳು ಎಂದು ತಿಳಿಸುವನು. ವಿಷ್ಣುವು ಇಂದ್ರನೀಲ ಮಣಿಯಿಂದಾದ ಲಿಂಗವನ್ನು ಪೂಜಿಸುವನೆಂದು ಹಲವು ವೇದ ಮಂತ್ರಗಳು
ಪ್ರತಿಪಾದಿಸುತ್ತವೆ.
ಜಗದ್ಗುರು ಪಂಚ ಆಚಾರ್ಯರಿಂದ ಎಲ್ಲ ದೇವತೆಗಳು ಲಿಂಗಧಾರಣೆಯ ದೀಕ್ಷೆಯನ್ನು ಪಡೆದವರಾದರೆ, ಮನುಷ್ಯರಿಂದ ದೇವತೆಗಳು ದೀಕ್ಷೆಯನ್ನು
ಪಡೆದಂತೆ ಹಲವಾರು ಭಾವಿಸುವರು. ಆದರೆ ಇದು ಸತ್ಯಕ್ಕೆ ದೂರವಾದ ಸಂಗತಿಯು. ನ ಗುರೋರಧಿಕಂ ನ ಗುರೋರಧಿಕಂ ನ ಗುರೋರಧಿಕಂ
ಶಿವಶಾಸನತಃ ಶಿವ ಶಾಸನತಃ ಶಿವ ಶಾಸನತಃ ಎನ್ನುವ ಆಗಮೊಕ್ತಿಯಂತೆ ಗುರು ತತ್ವವು ದೇವತಾ ತತ್ವಕ್ಕಿಂತ ಎತ್ತರದ ಸ್ಥಾನದಲ್ಲಿದೆ.
ಇದರ ವಾಸ್ತವಿಕ ಕಾರಣವನ್ನು ತಿಳಿಯಬೇಕೆಂದರೆ, ಯಜುರ್ವೇದದ ವೀರ ಲೈಂಗ್ಯೋಪನಿಷದ ಗುರುತತ್ವ ಉಗಮವಾದ ಕಥೆಯನ್ನು ತಿಳಿಸುತ್ತದೆ.